Hello ಸ್ನೇಹಿತರೇ, ಕರ್ನಾಟಕಕ್ಕೆ ಮುಂಗಾರು (Monsoon) ಕಾಲಿಟ್ಟಿದ್ದರೂ, ಅಂದುಕೊಂಡಷ್ಟು ಮಳೆಯಾಗುತ್ತಿಲ್ಲ. ಇದರಿಂದ ರೈತ (Farmer) ಕಂಗಾಲ ಆಗಿದ್ದು, ತಾನು ಅಂದುಕೊಂಡಷ್ಟು ಇಳುವರಿ ಬಾರದೆ ನಷ್ಟ ಅನುಭವಿಸುತ್ತಿದ್ದಾನೆ. ಇದರಿಂದ ಮಾರುಕಟ್ಟೆಗೆ (Market) ಸಮರ್ಪಕವಾಗಿ ತರಕಾರಿ (Vegetables) ಬಾರದ ಹಿನ್ನೆಲೆ ಬೆಲೆಗಳು ಗಗನಕ್ಕೆ ಏರುತ್ತಿವೆ. ಈಗಾಗಲೆ ತರಕಾರಿ ಬೆಲೆ ದುಪ್ಪಟ್ಟಾಗಿದ್ದು, ಇದರ ಬೆನ್ನಲ್ಲೇ ದಿನಸಿ ಸಾಮಗ್ರಿಗಳ (Groceries) ಬೆಲೆ ಕೂಡ ಏರಿಕೆಯಾಗುತ್ತಿದೆ. ಇದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೇ ಈ ವಾರ ದಿನಸಿ ಸಾಮಗ್ರಿಗಳ ಬೆಲೆ 5 ರಿಂದ 10 ರುಪಾಯಿ ಏರಿಕೆಯಾಗಿದೆ. ಕಳೆದ ವಾರ ಕೆಜಿಗೆ 50 ರೂ ಇದ್ದ ಸ್ಟೀಮ್ ಹಾಗೂ ಸೋನೆ ಮುಸುರಿ ರಾ ರೈಸ್ ಈ ವಾರ 50 ರಿಂದ 60 ರೂ. ಆಗಿದೆ.

ರಾಜ್ಯದಲ್ಲಿ ದಿನಸಿ ಪದಾರ್ಥಗಳ ಬೆಲೆ ಗನಗನಕ್ಕೇರಿದೆ. ಅಕ್ಕಿ, ಹೆಸರು, ಉದ್ದು ಸೇರಿದಂತೆ ಆಹಾರ ಧಾನ್ಯಗಳ ಬೆಲೆ ಹೆಚ್ಚಳವಾಗಿದ್ದು, ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ.
ಇನ್ನು ಓದಿ : ‘ಲ್ಯಾಪ್ ಟಾಪ್’ ಕೊಳ್ಳುವವರಿಗೆ ಸಿಹಿಸುದ್ದಿ : ಗೌರಿ-ಗಣೇಶ ಹಬ್ಬಕ್ಕೆ ಬಂಪರ್ ಆಫರ್ ನೀಡಿದ ಅಮೆಜಾನ್
ಮಳೆ ಕೊರತೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎರಡನೇ ಸಲ ಬಿತ್ತಿದ ಬೆಳೆ ಕೂಡ ಹಾಳಾಗತೊಡಗಿದೆ.
ಈ ಬಾರಿ ಉತ್ಪಾದನೆ ಪ್ರಮಾಣ ಶೇಕಡ 40ರಷ್ಟು ಕುಸಿತ ಕಾಣುವ ಆತಂಕ ಇದೆ. ಪರಿಸ್ಥಿತಿಯ ಲಾಭ ಪಡೆದು ಕೆಲವೆಡೆ ಕೃತಕ ಆಭಾವ ಸೃಷ್ಟಿಸಿರುವ ಶಂಕೆ ವ್ಯಕ್ತವಾಗಿದೆ.
ಈ ಕಾರಣದಿಂದ ಆಹಾರ ಧಾನ್ಯಗಳ ಬೆಲೆ ಭಾರಿ ಏರಿಕೆಯಾಗಿದೆ. ತೊಗರಿ ಬೇಳೆ ದರ ಕೆಜಿಗೆ 140 ರಿಂದ 180 ರೂ., ಹೆಸರುಬೇಳೆ 110 ರಿಂದ 120 ರೂ., ಉದ್ದಿನ ಬೇಳೆ 115 ರಿಂದ 130 ರೂ., ಕಡಲೆ 125 ರಿಂದ 132 ರೂ., ವಿವಿಧ ಅಕ್ಕಿದರ ಈಗ ಇರುವ ದರಕ್ಕಿಂತ 10 ರಿಂದ 20 ರೂ. ವರೆಗೆ ಹೆಚ್ಚಳವಾಗಿದೆ. ಬಹುತೇಕ ಎಲ್ಲಾ ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗಿರುವುದರಿಂದ ಗ್ರಾಹಕರು ಕಂಗಾಲಾಗಿದ್ದಾರೆ.
ದಿನಸಿ ಸಾಮಗ್ರಿಗಳ ಬೆಲೆ ಏರಿಕೆ | ||
ಸಾಮಗ್ರಿ | ಹಿಂದಿನ ದರ (ರೂ.) | ಈಗಿನ ದರ (ರೂ.) |
ಅಕ್ಕಿ | 40 | 60 |
ತೂರ್ ದಾಲ್ | 96 | 145 – 150 |
ಉದ್ದಿನಬೇಳೆ | 110 | 140 |
ಮಸೂರ್ದಾಲ್ | 74 | 88 |
ಹೆಸರು ಬೇಳೆ | 95 | 120 |
ಜೀರಾ | 350 | 750 |
ಅರಿಶಿಣ ಪುಡಿ | 126 | 307 |
ಚಿಲ್ಲಿ ಪೌಡರ್ | 186 | 425 |
ದನಿಯಾ ಪೌಡರ್ | 150 | 218 |
ಪೆಪ್ಪರ್ | 380 | 580 |
ಬ್ಯಾಡಗಿ ಮೆಣಸು | 330 | 850 |
ಅವರೆಬೇಳೆ | 130 | 190 |
ಅವರೆಕಾಳು | 110 | 150 |
ಅಲಸಂದೆ ಕಾಳು | 70 | 110 |
ಹುರುಳಿಕಾಳು | 60 | 90 |
ಅವಲಕ್ಕಿ | 35 | 48 |
ರಾಗಿ | 30 | 38 |