Hello ಸ್ನೇಹಿತರೇ, ಪ್ರದಾನ್ ಮಂತ್ರಿ ಕಿಸಾನ್ ಯೋಜನೆ ಕಂತಿನ ಹಣ ನೀಡುವ ಉದ್ದೇಶ ದೇಶದ ಬಹುತೇಕ ರೈತರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಬೆಳೆ ನಷ್ಟವನ್ನು ಭರಿಸಬೇಕಾದ ಅನೇಕ ರೈತರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ರೈತರ ಆರ್ಥಿಕ ಆರೋಗ್ಯ ಸುಧಾರಿಸಲು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅಂತಹ ಒಂದು ಯೋಜನೆಯ ಹೆಸರು PM ಕಿಸಾನ್ ಯೋಜನೆಯಾಗಿದೆ.

ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ ಫಲಾನುಭವಿಗಳಾಗಲು 81,000ಕ್ಕೂ ಅಧಿಕ ರೈತರು ಅನರ್ಹರಾಗಿದ್ದಾರೆಂದು ಹೇಳಲಾಗಿದ್ದು ಇವರೆಲ್ಲರಿಂದ ಹಣ ವಾಪಸ್ ಪಡೆಯುವ ಪ್ರಕ್ರಿಯೆಯನ್ನು ಆರಂಭಿಸಲು ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಸರಕಾರ ಸೂಚನೆ ನೀಡಿದೆ ಎಂದು ವರದಿಯಾಗಿದೆ.
ಈ ರೈತರು ಆದಾಯ ತೆರಿಗೆ ಪಾವತಿಸುತ್ತಿದ್ದಾರೆ ಮತ್ತು ಇತರ ಕಾರಣಗಳಿಗಾಗಿ ಈ ಯೋಜನೆಯ ಫಲಾನುಭವಿಗಳಾಗಲು ಅನರ್ಹರಾಗಿದ್ದಾರೆ ಎನ್ನಲಾಗಿದೆ.
ಪಿಎಂ-ಕಿಸಾನ್ ಹಣ ಅನರ್ಹ ಫಲಾನುಭವಿಗಳು
“ಪರಿಶೀಲನೆಯ ನಂತರ ಒಟ್ಟು 81,595 ರೈತರು (45,879 ಮಂದಿ 2020 ರಿಂದ ಆದಾಯ ತೆರಿಗೆ ಪಾವತಿಸುವವರು ಮತ್ತು 35,716 ಮಂದಿ ಇತರ ಕಾರಣಗಳಿಗಾಗಿ) ಬಿಹಾರದಲ್ಲಿ ಅನರ್ಹ ಫಲಾನುಭವಿಗಳು ಎಂದು ಗುರುತಿಸಲಾಗಿದೆ. ಇವರೆಲ್ಲರಿಗೆ ಈ ಹಿಂದೆ ಪಾವತಿಸಲಾದ ಒಟ್ಟು ಮೊತ್ತವಾದ ರೂ 81.6 ಕೋಟಿ ಹಣವನ್ನು ಅವರಿಂದ ವಾಪಸ್ ಸಂಗ್ರಹಿಸುವಂತೆ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಸೂಚಿಸಲಾಗಿದೆ ಎಂದು ಕೃಷಿ ಇಲಾಖೆಯ ನಿರ್ದೇಶಕ ಅಲೋಕ್ ರಂಜನ್ ಘೋಷ್ ಹೇಳಿದ್ದಾರೆ.
ಈ ಪ್ರಕ್ರಿಯೆಗೆ ಆದ್ಯತೆ ನೀಡುವಂತೆ ಹಿರಿಯ ಬ್ಯಾಂಕ್ ಅಧಿಕಾರಿಗಳಿಗೆ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಬ್ಯಾಂಕರ್ಗಳ ಸಮಿತಿ ಸಭೆಯಲ್ಲಿ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅನರ್ಹ ರೈತರಿಗೆ ಅಗತ್ಯವಿದ್ದರೆ ಜ್ಞಾಪನೆಗಳನ್ನು ಕಳುಹಿಸುವಂತೆ ಹಾಗೂ ಅವರ ಖಾತೆಗಳನ್ನು ಮುಟ್ಟುಗೋಲು ಹಾಕುವಂತೆಯೂ ಬ್ಯಾಂಕ್ಗಳಿಗೆ ಸೂಚಿಸಲಾಗಿದೆ. ಇಲ್ಲಿಯ ತನಕ ಅನರ್ಹ ಫಲಾನುಭವಿಗಳಿಂದ ಸುಮಾರು ರೂ 10.3 ಕೋಟಿ ವಾಪಸ್ ಪಡೆದುಕೊಳ್ಳಲಾಗಿದೆ ಎಂದು ಘೋಷ್ ಹೇಳಿದ್ದಾರೆ.