JioBharat B1 4G ಕೀಪ್ಯಾಡ್ ಫೋನ್ ಅನ್ನು ಪರಿಚಯಿಸಲಾಗುತ್ತಿದೆ

ಸ್ಮಾರ್ಟ್‌ಫೋನ್‌ಗಳು ಸರ್ವವ್ಯಾಪಿಯಾಗಿರುವ ಯುಗದಲ್ಲಿ, ಹೈ-ಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಒದಗಿಸುತ್ತಿದೆ, ತಮ್ಮ ಮೊಬೈಲ್ ಸಾಧನಗಳಲ್ಲಿ ಸರಳತೆ ಮತ್ತು ಕೈಗೆಟುಕುವ ದರವನ್ನು ಬಯಸುವ ಭಾರತೀಯ ಜನಸಂಖ್ಯೆಯ ಗಣನೀಯ ವಿಭಾಗವು ಇನ್ನೂ ಇದೆ. ಈ ಅಗತ್ಯವನ್ನು ಉದ್ದೇಶಿಸಿ, ರಿಲಯನ್ಸ್ ಜಿಯೋ JioBharat B1 4G ಕೀಪ್ಯಾಡ್ ಫೋನ್ ಅನ್ನು ಪರಿಚಯಿಸಿದೆ – ಇದು ಸಾಂಪ್ರದಾಯಿಕ ಕೀಪ್ಯಾಡ್‌ನ ಪರಿಚಿತತೆಯನ್ನು 4G ಸಂಪರ್ಕದ ಅನುಕೂಲಗಳೊಂದಿಗೆ ಸಂಯೋಜಿಸುತ್ತದೆ.
ರಿಲಯನ್ಸ್ ಜಿಯೋ ಸಂಸ್ಥೆಯು ತನ್ನ ಜಿಯೋಭಾರತ್ (JioBharat) ಸರಣಿಯ ಈಗ ನೂತನವಾಗಿ ಜಿಯೋ ಭಾರತ್ B1 ( JioBharat B1 ) ಹೆಸರಿನ ಹೊಸ ಫೀಚರ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಫೋನ್ ಜಿಯೋ ಭಾರತ್ V2 ಮತ್ತು K1 ಕಾರ್ಬನ್ ಮಾದರಿಗಳ ಸ್ವಲ್ಪ ಅಪ್‌ಗ್ರೇಡ್ ಆವೃತ್ತಿಯಾಗಿ ಕಾಣಿಸುತ್ತದೆ.
ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಫೋನ್ ಅನ್ನು ಜಿಯೋ ಭಾರತ್ B1 ಸರಣಿ ಎಂದು ಲಿಸ್ಟ್ ಮಾಡಲಾಗಿದೆ.
ರಿಲಯನ್ಸ್ ಜಿಯೋ ಕಂಪನಿಯು ಟೆಲಿಕಾಂ ಸೇವೆಗಳ ಜೊತೆಗೆ ಮೊಬೈಲ್ ಮಾರುಕಟ್ಟೆಯಲ್ಲಿ ಅಗ್ಗದ ಫೋನ್‌ಗಳ ಮೂಲಕ ಕೂಡಾ ಹೆಸರುವಾಸಿಯಾಗಿದೆ. ಈ ನೂತನ ಫೋನ್ ಸ್ವಲ್ಪ ದೊಡ್ಡ ಸ್ಕ್ರೀನ್ ನೊಂದಿಗೆ 4G ಸೌಲಭ್ಯದ ಮೊಬೈಲ್ ಆಗಿದೆ. ಇನ್ನುಳಿದಂತೆ ಸಂಸ್ಥೆಯು ಈ ಹೊಸ ಈ ಜಿಯೋ ಭಾರತ್ B1 ಫೋನ್‌ನ ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
ಆನ್‌ಲೈನ್‌ನಲ್ಲಿ ಬುಕ್ ಮಾಡಿ ಜಿಯೋ ಭಾರತ್ B1 Click Here
ಜಿಯೋ ಭಾರತ್ B1 ಫೀಚರ್ಸ್ ಹೀಗಿವೆ
ಜಿಯೋ ಭಾರತ್ B1 ಫೋನ್ ಇದು 2.4 ಇಂಚಿನ ಸ್ಕ್ರೀನ್ ಹೊಂದಿದ್ದು, ಇದರೊಂದಿಗೆ 2000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನ ಹೊಂದಿರುವ ಪ್ಲಸ್ ಪಾಯಿಂಟ್ ಎನಿಸಿದೆ. ಅಂದಹಾಗೆ ಇದು ಜಿಯೋದ ಮತ್ತೊಂದು ಬಜೆಟ್ ಫೋನ್ ಆಗಿದ್ದು, ಈ ಫೋನ್ ಅನ್ನು ಸ್ವಲ್ಪ ಉತ್ತಮವಾದ ವಿಭಾಗದಲ್ಲಿ ಕಾಣಿಸಿಕೊಂಡಿದೆ.
ನೂತನ ಜಿಯೋ ಭಾರತ್ B1 ಫೋನ್ ಈ ಹಿಂದಿನ ವೇರಿಯಂಟ್‌ಗಳಿಗೆ ಹೋಲಿಸಿದರೆ ಅದರ ಸ್ಕ್ರೀನ್ ಮತ್ತು ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯದಲ್ಲಿ ಕೆಲವು ಚಿಕ್ಕ ಪುಟ್ಟ ಅಪ್‌ಡೇಟ್‌ಗಳನ್ನು ಮಾತ್ರ ನೀಡುತ್ತದೆ ಮತ್ತು ಪ್ರಮುಖ ಬದಲಾವಣೆಗಳನ್ನು ಪರಿಚಯಿಸುವುದಿಲ್ಲ. ಇನ್ನು ಈ ಫೋನ್‌ನಲ್ಲಿ ಕ್ಯಾಮೆರಾ ಆಯ್ಕೆ ನೀಡಲಾಗಿದ್ದು, ಆದರೆ ಕ್ಯಾಮೆರಾ ಮೆಗಾಪಿಕ್ಸೆಲ್‌ಗಳ ಬಗ್ಗೆ ಯಾವುದೇ ಮಾಹಿತಿಯನ್ನು ಒದಗಿಸಲಾಗಿಲ್ಲ.
ಜಿಯೋ ಭಾರತ್ B1 ಫೋನ್ ಜಿಯೋ ಅಪ್ಲಿಕೇಶನ್‌ಗಳ ಪ್ರಿ ಇನ್‌ಸ್ಟಾಲ್ ಒಳಗೊಂಡಿದೆ. ಈ ಫೋನ್‌ನ ಬಳಕೆದಾರರು ಸಿನಿಮಾ, ವೀಡಿಯೊಗಳು ಮತ್ತು ಕ್ರೀಡಾ ಮುಖ್ಯಾಂಶಗಳನ್ನು ಆನಂದಿಸಬಹುದು ಎಂದು ಜಿಯೋ ಸಂಸ್ಥೆಯು ಹೇಳಿಕೊಂಡಂತೆ ಇತರ ಮಾದರಿಗಳಂತೆ ಫೋನ್ ಜಿಯೋ ಆಪ್ ನೋಮದಿಗೆ ಬರುತ್ತದೆ. ಜಿಯೋ ಪ್ರಕಟಣೆಯ ಪ್ರಕಾರ, ಜಿಯೋ ಭಾರತ್ ಸರಣಿಯು 23 ಭಾಷೆಗಳನ್ನು ಸಪೋರ್ಟ್ ಮಾಡುತ್ತದೆ ಎಂದು ಹೇಳಲಾಗಿದೆ.
ಕಂಪನಿಯ ವೆಬ್‌ಸೈಟ್‌ನ ಪ್ರಕಾರ, ಜಿಯೋ ಪ್ರಿ ಇನ್‌ಸ್ಟಾಲ್ ಅಪ್ಲಿಕೇಶನ್‌ಗಳನ್ನು ಫೋನ್‌ನೊಂದಿಗೆ ಸೇರ್ಪಡೆ ಮಾಡಲಾಗಿದೆ. ಅಲ್ಲದೇ ಜಿಯೋ ಹೊರತುಪಡಿಸಿ ಇತರ ಸಿಮ್ (SIM) ಕಾರ್ಡ್‌ಗಳನ್ನು ಈ ಜಿಯೋ ಭಾರತ್ ಫೋನ್‌ಗಳಲ್ಲಿ ಬಳಸಲು ಆಗುವುದಿಲ್ಲ. ಸದ್ಯ ಜಿಯೋ ಭಾರತ್ B1 ಫೋನ್ ಕಪ್ಪು ಬಣ್ಣದಲ್ಲಿ ಮಾತ್ರ ಲಭ್ಯವಿದೆ. ಒಟ್ಟಾರೆಯಾಗಿ, ಜಿಯೋ ಭಾರತ್ B1 ಸರಣಿಯು 4G ಫೋನ್ ಆಗಿದ್ದು, ಹಿಂದಿನ ಮಾದರಿಗಳಿಗಿಂತ ಸ್ವಲ್ಪ ಬಿಗ್ ಸ್ಕ್ರೀನ್ ಮತ್ತು ಉತ್ತಮ ಬ್ಯಾಟರಿ ಸಹ ಹೊಂದಿದೆ.
ಅಂದಹಾಗೆ ಜಿಯೋ ಸಂಸ್ಥೆಯ ಈ ನೂತನ ಜಿಯೋ ಭಾರತ್ B1 ಫೀಚರ್ ಫೋನ್ 1,299ರೂ. ಪ್ರೈಸ್‌ಟ್ಯಾಗ್ ಅನ್ನು ಪಡೆದಿದೆ. ಹಾಗೆಯೇ ಈ ಫೋನ್ ಬ್ಲ್ಯಾಕ್ ಕಲರ್ ವೇರಿಯಂಟ್‌ನಲ್ಲಿ ಖರೀದಿಗೆ ಲಭ್ಯ ಆಗಲಿದೆ.
ಜಿಯೋ ಏರ್‌ಫೈಬರ್ ಪ್ಲಾನ್‌ಗಳ ಬೆಲೆ ಹೀಗಿದೆ
ಆರಂಭಿಕ ಜಿಯೋ ಏರ್‌ಫೈಬರ್ ಪ್ಲ್ಯಾನ್ ಬೆಲೆಯು 399ರೂ. ಆಗಿದೆ. ಅದೇ ರೀತಿ ಗರಿಷ್ಠ ಜಿಯೋ ಏರ್‌ಫೈಬರ್ ಪ್ಲ್ಯಾನ್ ದರವು 3999ರೂ. ಆಗಿದೆ. ಹೆಚ್ಚಿನ ಇಂಟರ್ನೆಟ್ ವೇಗ ಮತ್ತು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮುಂತಾದ ಜನಪ್ರಿಯ ಓಟಿಟಿ ಆಪ್‌ಗಳ ಆಕ್ಸಸ್‌ಗಾಗಿ, ಏರ್‌ಫೈಬರ್ ಮ್ಯಾಕ್ಸ್‌ಗೆ ಚಂದಾದಾರಿಕೆ ಯೋಜನೆಗಳು ಸಹ ಲಭ್ಯವಿದೆ. ಏರ್‌ಫೈಬರ್ ಮ್ಯಾಕ್ಸ್ ಬೆಲೆ ಶ್ರೇಣಿ 1499ರೂ ದಿಂದ 3999ರೂ. ಆಗಿದೆ.