ಕಾವೇರಿ ಜಲವಿವಾದ: ಒಂದೇ ವಾರದಲ್ಲಿ ಎರಡು ಬಂದ್‌ಗಳು- ಬೆಂಗಳೂರಿಗೆ ತಟ್ಟಲಿದೆ ಬಿಸಿ, ರಾಜ್ಯದ ಬೊಕ್ಕಸಕ್ಕೆ 4000 ಕೋಟಿ ರೂಪಾಯಿ ನಷ್ಟ!

Hello ಸ್ನೇಹಿತರೇ, ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕರ್ನಾಟಕ ರೈತ ಸಂಘ ನಾಯಕರು ಕಾವೇರಿ ನೀರಿನ ವಿವಾದ ವಿಚಾರವಾಗಿ ಸೆಪ್ಟೆಂಬರ್ 26, ಮಂಗಳವಾರ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದಾರೆ. ಅದರಂತೆಯೇ ಇಂದು ಬೆಂಗಳೂರು ಬಂದ್ ಮಾಡಲಾಗಿದೆ. ಇನ್ನು ಈ ವಾರದಲ್ಲಿ ಶುಕ್ರವಾರ (ಸೆಪ್ಟೆಂಬರ್ 29) ರಂದು ಕೂಡಾ ಬಂದ್ ಮಾಡಲಾಗುತ್ತದೆ.

Karnataka band for kaveri on Friday
Karnataka band for kaveri on Friday

ಸೆಪ್ಟೆಂಬರ್‌ 26 ಬೆಂಗಳೂರು ಬಂದ್‌ನ ನೇತೃತ್ವವನ್ನು ರೈತ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ವಹಿಸಿದರೆ, ಸೆಪ್ಟೆಂಬರ್‌ 29ರ ಕರ್ನಾಟಕ ಬಂದ್‌ನ ನೇತೃತ್ವವನ್ನು ವಾಟಾಳ್ ನಾಗರಾಜ್‌ ವಹಿಸಲಿದ್ದಾರೆ. ಕರ್ನಾಟಕದಲ್ಲಿ ನೂರಾರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇದೆ. ಹೀಗಿದ್ದರೂ ತಮಿಳುನಾಡಿಗೆ ನೀರು ಬಿಡುವಂತೆ ಸೂಚಿಸಿರುವುದು ಸಹಜವಾಗಿ ನಾಡಿನ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟಾಗಲಿದೆ.

ವಾರದಲ್ಲಿ ಎರಡು ದಿನಗಳ ಕಾಲ ನಡೆಯುವ ಈ ಬಂದ್‌ನಿಂದಾಗಿ ಕರ್ನಾಟಕ ರಾಜ್ಯದ ಬೊಕ್ಕಸಕ್ಕೆ ಬರೋಬ್ಬರಿ 4000 ಕೋಟಿ ರೂಪಾಯಿ ನಷ್ಟ ಉಂಟಾಗಲಿದೆ. ಕೊರೊನಾ ಸಾಂಕ್ರಾಮಿಕದಿಂದಾಗಿ ದೇಶದಾದ್ಯಂತ ಆರ್ಥಿಕ ಸ್ಥಿತಿಯು ಬಿಗಾಡಯಿಸಿದೆ. ಈಗಷ್ಟೇ ಇದರಿಂದ ರಾಜ್ಯದ ಆರ್ಥಿಕತೆ ಕೊಂಚ ಸುಧಾರಿಸಿಕೊಳ್ಳುತ್ತಿದೆ. ಈ ನಡುವೆ ಈ ಬಂದ್‌ನಿಂದಾಗಿ ರಾಜ್ಯವು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಯುವ ಗುರಿ ತಲುಪಲು ಸಾಧ್ಯವಾಗದು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇನ್ನು ಓದಿ : ಮಳೆಯಿಲ್ಲದೆ ಕಂಗೆಟ್ಟ ಎಲ್ಲಾ ರೈತರಿಗೆ ಸಿಹಿಸುದ್ದಿ, ಸರ್ಕಾರದ ಮಹತ್ವದ ನಿರ್ಧಾರ

“ಬಂದ್‌ನಿಂದಾಗಿ ಜನ ಸಾಮಾನ್ಯರ ದೈನಂದಿನ ವಹಿವಾಟಿನ ಮೇಲೆ ಪ್ರಭಾವ ಉಂಟಾಗಲಿದೆ. ಭಾವನಾತ್ಮಕ ವಿಚಾರವಾಗಲಿ ಅಥವಾ ರಾಜಕೀಯ ವಿಚಾರವಾಗಲಿ, ಯಾವುದೇ ವಿಚಾರವಾದರೂ ಬಂದ್ ಒಂದು ನಿಜವಾದ ಆಯ್ಕೆಯಲ್ಲ,” ಎಂದು ಕರ್ನಾಟಕ ಉದ್ಯೋಗಿಗಳ ಅಸೋಸಿಯೇಷನ್ (ಕೆಇಎ) ಅಧ್ಯಕ್ಷ ಬಿಸಿ ಪ್ರಭಾಕರ್ ಹೇಳಿದ್ದಾರೆ.

“ಕಾವೇರಿ ವಿಚಾರದಲ್ಲಿ ಇರುವ ಒಂದು ಭಾವನೆ ಹಾಗೂ ಪರಿಣಾಮದ ಬಗ್ಗೆ ನಾವು ನಿಜವಾಗಿಯೂ ತಿಳಿದಿದ್ದೇವೆ. ಆದರೆ ಯಾವುದೇ ವಿಚಾರವಾದರೂ ಬಂದ್ ಮಾಡುವುದು ಒಂದು ಸಮಸ್ಯೆಗೆ ಉತ್ತರವಲ್ಲ. ಪ್ರತಿಭಟನೆಗಳನ್ನು ಮಾಡಲಿ ಆದರೆ ಬಂದ್ ಮಾಡುವುದು ಸರಿಯಲ್ಲ,” ಎಂದು ಕೂಡಾ ಕೆಇಎ ಅಧ್ಯಕ್ಷ ಬಿಸಿ ಪ್ರಭಾಕರ್ ತಿಳಿಸಿದರು.

Join Telegram Group Join Now
WhatsApp Group Join Now

“ಆರ್ಥಿಕ ಸ್ಥಿತಿ ಒಂದೆಡೆಯಾದರೆ, ಇನ್ನೊಂದೆಡೆ ಬಂದ್‌ ಕರ್ನಾಟಕ ಹಾಗೂ ಬೆಂಗಳೂರಿನ ವಿಶ್ವಾಸಕ್ಕೆ ಧಕ್ಕೆ ಉಂಟು ಮಾಡುತ್ತದೆ. ಕರ್ನಾಟಕ ಉದ್ಯೋಗಿಗಳ ಅಸೋಸಿಯೇಷನ್ (ಕೆಇಎ) ಈ ಬಂದ್‌ಗೆ ಬೆಂಬಲ ನೀಡದು. ಸ್ಥಳೀಯ ಪರಿಸ್ಥಿತಿಯನ್ನು ನೋಡಿಕೊಂಡು ಕಂಪನಿಗಳನ್ನು ಬಂದ್ ಮಾಡಲು 720 ಸದಸ್ಯ ಕಂಪನಿಗಳಿಗೆ ತಿಳಿಸಲಾಗಿದೆ,” ಎಂದು ತಿಳಿಸಿದರು.

ಇನ್ನು ಓದಿ : ಶಾಲಾ ಮಕ್ಕಳ ಪೋಷಕರಿಗೆ ಎಚ್ಚರಿಕೆ ನೀಡಿದ ಆರೋಗ್ಯ ಇಲಾಖೆ! ನಿಫಾ ವೈರಸ್ ಎಂದರೇನು? ರೋಗಲಕ್ಷಣಗಳು,ಮುಂಜಾಗ್ರತಾ ಕ್ರಮಗಳೇನು?

ಒಂದು ದಿನದಲ್ಲಿ ಆಗುವ ನಷ್ಟದಿಂದ ನಾವು ಹೊರಬರಬೇಕಾದರೆ ನಮಗೆ ಕಡಿಮೆ ಎಂದರೂ ಒಂದು ವಾರಗಳು ಬೇಕಾಗುತ್ತದೆ ಎಂದು ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀ (ಎಫ್‌ಕೆಸಿಸಿಐ) ಹೇಳಿದೆ.

“ಒಂದು ದಿನದ ಬಂದ್‌ನಿಂದಾಗಿ ಟ್ರೇಡಿಂಗ್ ವಲಯಕ್ಕೆ ಜಿಎಸ್‌ಟಿ ಸಂಗ್ರಹದಲ್ಲಿ ಸುಮಾರು 100 ಕೋಟಿ ರೂಪಾಯಿ ನಷ್ಟ ಉಂಟಾಗಲಿದೆ. ಕಾವೇರಿ ವಿಚಾರ ಆಗಿರುವುದರಿಂದ ಮಂಗಳವಾರ ಬೆಂಗಳೂರಿನಲ್ಲಿ ಶೇಕಡ 80 ರಷ್ಟು ಇಂಡಸ್ಟ್ರೀಗಳು ಬಂದ್ ಮಾಡಲಿದೆ. ಆದರೆ ಮತ್ತೆ ಶುಕ್ರವಾರ ಬಂದ್ ಸಾಧ್ಯವಿಲ್ಲ. ಇದನ್ನು ಸ್ಥಳೀಯ ಇಂಡಸ್ಟ್ರೀಗಳು ನಿರ್ಧಾರ ಮಾಡಲಿದೆ,” ಎಂದು ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಾಹೊತಿ ತಿಳಿಸಿದರು.

ಹೊಟೇಲ್ ಅಸೋಸಿಯೇಷನ್ ಅಡಿಯಲ್ಲಿ ಸುಮಾರು 10 ಲಕ್ಷ ಉದ್ಯೋಗಿಗಳು ಇದ್ದು, ಈ ಒಂದು ದಿನದ ಬಂದ್‌ನಿಂದ ಸುಮಾರು 100 ಕೋಟಿ ರೂಪಾಯಿ ಕಂದಾಯ ನಷ್ಟವಾಗಲಿದೆ. “ನಮ್ಮ ಇಂಡಸ್ಟ್ರೀಯಲ್ಲಿ ಕಂದಾಯ ಸೃಷ್ಟಿಗೆ ತೊಂದರೆ ಉಂಟಾಗಲಿದೆ. ಇತರೆ ಇಂಡಸ್ಟ್ರೀಗಳು ಒಂದು ದಿನದ ನಷ್ಟದಿಂದ ಕೆಲವು ಸಮಯದಲ್ಲಿ ಹೊರಬರಬಹುದು. ಆದರೆ ಹೊಟೇಲ್‌ಗಳಿಗೆ ಇದು ತೊಂದರೆಯಾಗಲಿದೆ,” ಎಂದು ರಮೇಶ್ ಚಂದ್ರ ಲಾಹೊತಿ ಹೇಳಿದರು.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ