ರೈತರು ಈ ತಪ್ಪುಗಳನ್ನ ಮಾಡಿದರೆ ಬರಲ್ಲ ಕಿಸಾನ್ ಸಮ್ಮಾನ್ 17 ನೇ ಕಂತಿನ ಹಣ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ನಾವು ನಿಮಗೆ ಒಂದು ಮಹತ್ವದ ಮಾಹಿತಿಯನ್ನು ನೀಡಲಿದ್ದೇವೆ. ರೈತರಿಗೆ ಬರಬೇಕಾದ ಪಿಎನ್ ಕಿಸನ್ 17 ಇನ್ನು ಅಕೌಂಟಿಗೆ ಬಂದಿಲ್ಲ ಬರಬೇಕಾದರೆ ಕೆಲವು ಈ ಹಂತಗಳನ್ನು ಅನುಸರಿಸಬೇಕಾಗಿದೆ ಮತ್ತು ಕೆಳಗೆ ಕೊಟ್ಟಿರುವ ತಪ್ಪುಗಳನ್ನು ಮಾಡಿದರೆ ಹಣ ಅಕೌಂಟಿಗೆ ಬರುವುದಿಲ್ಲ ಬನ್ನಿ ಈ ಲೆಕ್ಕದಲ್ಲಿ ನಾವು ನಿಮಗೆ ಇದರ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಅನ್ನು ನೀಡಲಿದ್ದೇವೆ.

Kisan Samman Nidhi 17th installment amount details
Kisan Samman Nidhi 17th installment amount details

PM Kisan Yojana Latest Update: ಪ್ರಸ್ತುತ ದೇಶದಲ್ಲಿ ರೈತರ ಹಿತಕ್ಕಾಗಿ 2018 ರಲ್ಲಿ PM Kisan ಯೋಜನೆಯನ್ನು ಆರಂಭಿಸಲಾಯಿತು. ಈ ಯೋಜನೆಯಡಿ ಕೋಟ್ಯಂತರ ರೈತರು ಸಹಾಯಧನವನ್ನು ಪಡೆಯುತ್ತಿದ್ದಾರೆ. ಎಲ್ಲಾ ಅರ್ಹ ಭೂಮಿ ಹೊಂದಿರುವ ರೈತ ಕುಟುಂಬಗಳಿಗೆ ತಲಾ ರೂ 2,000 ರಂತೆ ಮೂರು ಸಮಾನ ಕಂತುಗಳಲ್ಲಿ ವರ್ಷಕ್ಕೆ ರೂ 6,000 ಆದಾಯ ಬೆಂಬಲವನ್ನು ನೀಡಲಾಗುತ್ತದೆ.

ಇನ್ನು ಯೋಜನೆಯ ಲಾಭವನ್ನು ಪಡೆಯಲು ಪ್ರತಿ ವರ್ಷದಲ್ಲಿ ಹೊಸ ಹೊಸ ಅರ್ಜಿಗಳನ್ನು ಸಲ್ಲಿಸಲಾಗುತ್ತದೆ. ಸರ್ಕಾರದ ಷರತ್ತುಗಳ ಅನುಸಾರ ಯಾರು ಅರ್ಜಿಯನ್ನು ಸಲ್ಲಿಸುತ್ತಾರೋ ಅಂತವರು ಮಾತ್ರ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಸದ್ಯ PM Kisan ಯೋಜನೆಯಡಿ 17 ನೇ ಕಂತಿನ ಹಣ ಬಿಡುಗಡೆಯಾಗಿದೆ. ಇನ್ನು ಅರ್ಜಿ ಸಲ್ಲಿಕೆಯಲ್ಲಿ ಈ ತಪ್ಪಾದರೆ ನೀವು 17 ನೇ ಕಂತಿನ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅರ್ಜಿ ಸಲ್ಲಿಸುವಾಗ ಈ 5 ತಪ್ಪುಗಳನ್ನು ಎಂದು ಮಾಡಬೇಡಿ.

ರೈತರು ಈ 5 ತಪ್ಪುಗಳನ್ನ ಮಾಡಿದರೆ ಬರಲ್ಲ ಕಿಸಾನ್ ಸಮ್ಮಾನ್ 17 ನೇ ಕಂತಿನ ಹಣ
1. ತಪ್ಪಾದ ಬ್ಯಾಂಕ್ ವಿವರ
ತಪ್ಪಾದ ಬ್ಯಾಂಕ್ ವಿವರಗಳ ಕಾರಣ, ಪಿಎಂ ಕಿಸಾನ್ ಯೋಜನೆಯಡಿ ಅರ್ಜಿಯನ್ನು ತಿರಸ್ಕರಿಸಬಹುದು. ಬ್ಯಾಂಕ್ ಖಾತೆ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಒಮ್ಮೆ ಪರಿಶೀಲಿಸಿ.

2. ಈ ವರ್ಗದ ಅಡಿಯಲ್ಲಿ ಬರುವವರು
ಅರ್ಜಿಯನ್ನು ತಿರಸ್ಕರಿಸಲು ಇನ್ನೊಂದು ಕಾರಣವೆಂದರೆ ಅರ್ಜಿದಾರರು ಹೊರಗಿಡುವ ವರ್ಗಕ್ಕೆ ಸೇರುತ್ತಾರೆ. ಅರ್ಹತೆ ಇಲ್ಲದವರು ಅರ್ಜಿಯನ್ನು ಸಲ್ಲಿಸಿದರೆ ಅಂತವರಿಗೆ 17 ನೇ ಕಂತಿನ ಹಣ ಜಮಾ ಆಗುವುದಿಲ್ಲ.

3. ಬ್ಯಾಂಕ್ ಖಾತೆಯ ಆಧಾರ್‌ ಲಿಂಕ್
ಪಿಎಂ ಕಿಸಾನ್ ಯೋಜನೆಯಲ್ಲಿ ಅರ್ಜಿಯನ್ನು ತಿರಸ್ಕರಿಸಲು ಮೂರನೇ ಕಾರಣವೆಂದರೆ ಬ್ಯಾಂಕ್ ಖಾತೆಯು ಅರ್ಜಿದಾರರ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡದಿರುವುದು. ಯೋಜನೆಯ ಲಾಭ ಪಡೆಯಲು ಇಂದೇ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಅನ್ನು ಲಿಂಕ್ ಮಾಡಿ.

Join Telegram Group Join Now
WhatsApp Group Join Now

4. ಅರ್ಜಿದಾರರ ವಯಸ್ಸು
ಅರ್ಜಿಯನ್ನು ತಿರಸ್ಕರಿಸಲು ನಾಲ್ಕನೇ ಕಾರಣವೆಂದರೆ ಅರ್ಜಿದಾರರ ವಯಸ್ಸು. ಅರ್ಜಿದಾರರ ವಯಸ್ಸು 18 ವರ್ಷಕ್ಕಿಂತ ಕಡಿಮೆಯಿದ್ದರೆ ಅರ್ಜಿ ನಮೂನೆಯನ್ನು ತಿರಸ್ಕರಿಸಬಹುದು.

5. ಇ-ಕೆವೈಸಿ ಪೂರ್ಣಗೊಳಿಸುತ್ತಿಲ್ಲ
ಐದನೇ ಕಾರಣ ಇ-ಕೆವೈಸಿಯನ್ನು ಪೂರ್ಣಗೊಳಿಸದಿರಬಹುದು. ರೈತರು ಪ್ರಯೋಜನಗಳನ್ನು ಪಡೆಯಲು ಬಯಸಿದರೆ ಇ-ಕೆವೈಸಿ ಕಡ್ಡಾಯವಾಗಿದೆ. ಆದಷ್ಟು ಬೇಗಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದರೆ ಯೋಜನೆಯ ಲಾಭವನ್ನು ಪಡೆಯಬಹುದು.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ