ಮಕ್ಕಳೇ ಗಮನಿಸಿ! ಮೇ 29 ರಿಂದ ರಾಜ್ಯದಲ್ಲಿ ಶಾಲೆಗಳು ಪುನರಾರಂಭ! ಶಿಕ್ಷಣ ಇಲಾಖೆಯ ಸೂಚನೆ.

ನಮಸ್ಕಾರ ಸ್ನೇಹಿತರೆ ಬನ್ನಿ ಮಕ್ಕಳೇ ಈ ಲೇಖನದಲ್ಲಿ ನಾವು ನಿಮಗೆ ಒಂದು ಮಹತ್ವದ ಮಾಹಿತಿಯನ್ನು ನೀಡಲಿದ್ದೇವೆ. ಏನೆಂದರೆ, ಸರ್ಕಾರವು ಶಾಲೆಗಳಿಗೆ ಮಹತ್ವದ ನಿಮ್ಮ ಒಂದನ್ನು ನೀಡಿದೆ ಏನೆಂದರೆ, ಮೇ 29 ರಿಂದ ಶಾಲೆಗಳು ಪುನರಾರಂಭಗೊಳ್ಳಲು ಆದೇಶವನ್ನು ನೀಡಿದೆ ಬನ್ನಿ ನಾವು ನಿಮಗೆ ಕಂಪ್ಲೀಟ್ ಡೀಟೇಲ್ಸ್ ಅನ್ನು ನೀಡಲಿದ್ದೇವೆ.

Schools will resume in the state from May 29
Schools will resume in the state from May 29

ರಾಜ್ಯದ ಪಠ್ಯಕ್ರಮವನ್ನು ಅನುಸರಿಸುವ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 2024-25ನೇ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಕ್ರಿಯಾ ಯೋಜನೆಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಪ್ರಕಟಣೆಯಂತೆ ಮೇ 29ರಂದು ಶಾಲೆಗಳು ಪುನರಾರಂಭಗೊಳ್ಳಲಿವೆ.

ಕಳೆದ ವರ್ಷ ಭಾರಿ ಸುದ್ದಿ ಮತ್ತು ಗೊಂದಲಕ್ಕೆ ಕಾರಣವಾಗಿ ಕಾನೂನು ಸಮಸ್ಯೆಗಳನ್ನು ಎದುರಿಸಿದ ಮೌಲ್ಯಮಾಪನ ಪರೀಕ್ಷೆಯು 2024-25 ರಲ್ಲಿಯೂ ಮುಂದುವರಿಯುತ್ತದೆ. ಈ ಕುರಿತು ಪ್ರತ್ಯೇಕ ಸುತ್ತೋಲೆ ಹೊರಡಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

2024-25ರ ಶೈಕ್ಷಣಿಕ ವರ್ಷಕ್ಕೆ, ಮೊದಲ ಅವಧಿಯು ಮೇ 29 ರಿಂದ ಅಕ್ಟೋಬರ್ 2 ರವರೆಗೆ ಮತ್ತು ಎರಡನೇ ಅವಧಿಯು ಅಕ್ಟೋಬರ್ 21 ರಿಂದ ಏಪ್ರಿಲ್ 10, 2025 ರವರೆಗೆ ಇರುತ್ತದೆ. ಶೈಕ್ಷಣಿಕ ಕ್ಯಾಲೆಂಡರ್ ಒಟ್ಟು 244 ಶಾಲಾ ಕೆಲಸದ ದಿನಗಳನ್ನು ಒಳಗೊಂಡಿದೆ. ಕಲಿಕೆ-ಬೋಧನೆ ಪ್ರಕ್ರಿಯೆಗೆ 180 ದಿನಗಳನ್ನು ನಿಗದಿಪಡಿಸಲಾಗಿದೆ. ಅಕ್ಟೋಬರ್ 3 ರಿಂದ 20 ರವರೆಗೆ ದಸರಾ ರಜಾದಿನಗಳು ಇದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಒಟ್ಟು 121 ರಜೆಗಳು ಇರುತ್ತವೆ.

ರಾಜ್ಯದ ಶಾಲೆಗಳಾದ್ಯಂತ ಚಟುವಟಿಕೆಗಳ ಏಕರೂಪದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಈ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮಾರ್ಗಸೂಚಿಯಲ್ಲಿ ತಿಂಗಳ ವಾರು ಪಾಠ ವಿತರಣೆ, ಪಠ್ಯೇತರ ಚಟುವಟಿಕೆಗಳು, ಫಲಿತಾಂಶ-ಆಧಾರಿತ ಚಟುವಟಿಕೆಗಳು, ವಿಶೇಷ ಶನಿವಾರ (ಬ್ಯಾಗ್ ಮುಕ್ತ ದಿನ), ಪಾಠ ಸಂಬಂಧಿತ ಚಟುವಟಿಕೆಗಳು, ಬ್ಯಾಂಕ್ ನಿರ್ವಹಣೆ, ಪರೀಕ್ಷೆಗಳು ಮತ್ತು ಮೌಲ್ಯಮಾಪನ ವಿಶ್ಲೇಷಣೆಗೆ ಸಮಯ ನೀಡಿದೆ.

ಒಟ್ಟು 244 ಶಾಲಾ ದಿನಗಳಲ್ಲಿ, 26 ದಿನ ಮೌಲ್ಯಮಾಪನಕ್ಕೆ, 24 ದಿನಗಳನ್ನು ಪಠ್ಯೇತರ ಚಟುವಟಿಕೆಗಳಿಗೆ, 10 ದಿನಗಳು ಮೌಲ್ಯಮಾಪನ ಮತ್ತು ಫಲಿತಾಂಶ ಘೋಷಣೆಗೆ 10 ದಿನ ಮತ್ತು ನಾಲ್ಕು ದಿನಗಳನ್ನು ಸ್ಥಳೀಯ ರಜಾದಿನಗಳಿಗೆ ನಿಗದಿಪಡಿಸಲಾಗಿದೆ. ಹೆಚ್ಚುವರಿಯಾಗಿ, ಸರ್ಕಾರಿ ಶಾಲೆಗಳಲ್ಲಿ ಒಂದರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಎರಡು ಜೋಡಿ ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳು ಮತ್ತು ಖಾಸಗಿ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ತಾಲ್ಲೂಕುಗಳಿಗೆ ಸರಬರಾಜು ಮಾಡಲಾಗುವುದು ಎಂದು ತಿಳಿಸಿದೆ.

Join Telegram Group Join Now
WhatsApp Group Join Now

ಏಪ್ರಿಲ್ 10 ರೊಳಗೆ ಮೊದಲ ಹಂತದಲ್ಲಿ ವಿದ್ಯಾರ್ಥಿಗಳಿಗೆ ಈ ಪುಸ್ತಕಗಳನ್ನು ವಿತರಿಸುವಂತೆ ಮುಖ್ಯಶಿಕ್ಷಕರಿಗೆ ಸೂಚಿಸಲಾಗಿದ್ದು, ಹೊರಡಿಸಿರುವ ಮಾರ್ಗಸೂಚಿಯಂತೆ ಜೂನ್ 30 ರೊಳಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಬೇಸಿಗೆ ರಜೆಯಲ್ಲೂ ಬಿಸಿಯೂಟ

ಸರ್ವೋಚ್ಚ ನ್ಯಾಯಾಲಯುದ ಆದೇಶಾನುಸಾರ ಬರಗಾಲ ಪೀಡಿತ ಪ್ರದೇಶದಲ್ಲಿ ಬೇಸಿಗೆ ರಜೆಯಲ್ಲಿಯೂ ಸಹ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1-10 ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟವನ್ನು ನೀಡಲು ಸರ್ಕಾರ ಆದೇಶಿಸಿದೆ.

ಪ್ರಸ್ತುತ 2024-25ನೇ ಸಾಲಿನಬೇಸಿಗೆ ರಜೆಯ ಅವಧಿಯು ಏಪ್ರಿಲ್ 11 ರಿಂದ ಮೇ 28 ರವರೆಗೆ ಒಟ್ಟು 41 ದಿನಗಳ ಅವಧಿಯಲ್ಲಿ ಮಧ್ಯಾಹ್ನ ಉಪಾಹಾರ ಯೋಜನೆ ಕಾರ್ಯಕ್ರಮವನ್ನು ಶಾಲೆಗಳಲ್ಲಿ ನಡೆಸಬೇಕು. ಈ ಸಂಬಂಧ ಜನವರಿ 10 ರಂದು ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2024-25ರಲ್ಲಿ ನಡೆದ ಎಸ್‌ಎಸ್‌ಎಂಸಿ ಸಭೇ ನಡೆಸಲಾಗಿದೆ. ಸಭೆಯಲ್ಲಿ ಪಿ.ಎಂ. ಪೋಷಣ್ ಮಧ್ಯಾಹ್ನ ಉಪಾಹಾರ ಯೋಜನೆಯನ್ನು 1-10 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಅನುಷ್ಠಾನಕ್ಕಾಗಿ ಸಿದ್ಧಪಡಿಸಿದ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯ ಬಗ್ಗೆ ಸಭೆಯ ಸಹಮತ ನಿರ್ಣಯದಂತೆ ಮಾರ್ಚ್ 27 ರಂದು ಅನುಮೋದನೆ ಸಿಕ್ಕಿದೆ. ಹೀಗಾಗಿ ಬೇಸಿಗೆಯಲ್ಲೂ ಮಕ್ಕಳಿಗೆ ಬಿಸಿಯೂಟ ನೀಡಲು ನಿರ್ಧರಿಸಲಾಗಿದೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ