ಸರ್ಕಾರಿ ಶಾಲಾ ಮಕ್ಕಳು ತಯಾರಿಸಿದ ಪುನೀತ್ ಸ್ಯಾಟಲೈಟ್ ಗಗನಕ್ಕೆ ಹಾರಲು ಸಜ್ಜು : ಪುನೀತ್ ಉಪಗ್ರಹ 2024 ಮಾರ್ಚ್ ನಲ್ಲಿ ಉಡಾವಣೆ ಸಾಧ್ಯತೆ.

Puneet satellite built by government school children is likely to be launched in March 2024.
Puneet satellite built by government school children is likely to be launched in March 2024.

ರಾಜ್ಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಗಮನಾರ್ಹ ದಾಪುಗಾಲುಗಳನ್ನು ಮಾಡಿದ್ದಾರೆ. ಅವರ ಮೆದುಳಿನ ಕೂಸು, “ಪುನೀತ್ ಉಪಗ್ರಹ,” ಮಾರ್ಚ್ 2024 ರಲ್ಲಿ ಕಕ್ಷೆಗೆ ಉಡಾವಣೆಯಾಗುವ ಅಂಚಿನಲ್ಲಿದೆ. ಈ ಗಮನಾರ್ಹ ಸಾಧನೆಯು ಯುವ ಮನಸ್ಸುಗಳ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಆದರೆ ಶಿಕ್ಷಣದ ಶಕ್ತಿ ಮತ್ತು ಸಹಯೋಗದ ಪ್ರಯತ್ನದ ಉಜ್ವಲ ಉದಾಹರಣೆಯಾಗಿದೆ.

 ರಾಜ್ಯದ ಸರ್ಕಾರಿ ಶಾಲಾ ಮಕ್ಕಳು ನಿರ್ಮಿಸಿರುವ ಪುನೀತ್‌ ಉಪಗ್ರಹ ಉಡಾವಣೆಗೆ ಮಾರ್ಚ್‌ 2024 ರ ತಿಂಗಳಲ್ಲಿ ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೋ ಅವಕಾಶ ನೀಡುವ ಸಾಧ್ಯತೆ ಇದ್ದು, ಇಸ್ರೋ ಜೊತೆ ಸತತ ಸಂಪರ್ಕದಲ್ಲಿರುವಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌ಎಸ್‌ ಭೋಸರಾಜು ಸೂಚನೆ ನೀಡಿದ್ದಾರೆ.

ಈಗಾಗಲೇ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕ್ಯೂಬ್‌ಸ್ಯಾಟ್‌ ಸಬ್‌ಸಿಸ್ಟಮ್ಸ್‌ ವಿಷಯದಲ್ಲಿ ತರಬೇತಿ ನೀಡಲಾಗಿದೆ. ಪುನೀತ್‌ ಸ್ಯಾಟಲೈಟ್‌ನ ಮೂಲಕ ಕಳುಹಿಸಲಾಗುವ ಸೆಕಂಡರಿ ಪ್ಲೇಲೋಡ್​​ಗಳನ್ನು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸುತ್ತಿದ್ದಾರೆ. ಸದ್ಯ ಕ್ಯೂಬ್‌ಸ್ಯಾಟ್‌ ಸಬ್‌ಸಿಸ್ಟಮ್ಸ್‌ ನ ಪ್ರೊಟೋಟೈಪ್‌ ಇವಾಲ್ಯೂವೇಷನ್‌ ಬೋರ್ಡ್ಸ್‌ಗಳ ವ್ಯಾಲಿಡೇಷನ್‌ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಐಟಿಸಿಎ ತಂಡದಿಂದ ಮಾರ್ಚ್‌ 2024 ರಲ್ಲಿ ಪುನೀತ್‌ ಸ್ಯಾಟ್‌ ಉಡಾವಣೆ ಸಾಧ್ಯ ಎನ್ನುವ ಮಾಹಿತಿ ದೊರೆತಿದೆ.

ವಿಕಾಸಸೌಧದಲ್ಲಿ ಗುರುವಾರ ಪುನೀತ್‌ ಉಪಗ್ರಹ ಯೋಜನೆಯ ಪ್ರಗತಿ ಕುರಿತು ನಡೆದ ಸಭೆಯಲ್ಲಿ ಸಚಿವರು ಈ ಸೂಚನೆ ನೀಡಿದ್ದಾರೆ. ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್‌ ಅಸೋಸಿಯೇಷನ್ ಸದಸ್ಯರೊಂದಿಗೆ ಸಭೆ ನಡೆಸಲಾಗಿದೆ.ಕರ್ನಾಟಕ ವಿಜ್ಞಾನ, ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸಹಯೋಗದೊಂದಿಗೆ ಭಾರತೀಯ ಉಪಗ್ರಹ ಸಂಶೋಧನಾ ಸಂಸ್ಥೆ ಮತ್ತು ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್‌ ಅಸೋಸಿಯೇಷನ್ ನಿಂದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ