Hello ಸ್ನೇಹಿತರೇ, ಪ್ರತಿಯೊಬ್ಬ ವ್ಯಕ್ತಿಯು ಕೂಡ ಬ್ಯಾಂಕ್ ಖಾತೆಯನ್ನು (Bank Account) ಹೊಂದಿರುತ್ತಾರೆ. ತೆರಿಗೆ ಪಾವತಿ ಸೇರಿದಂತೆ ಇನ್ನಿತರ ಕೆಲಸಗಳಿಗೆ ಬ್ಯಾಂಕ್ ನ ಮಾಹಿತಿ ನೀಡಬೇಕಾಗುತ್ತದೆ. ಈ ಕಾರಣಕ್ಕೆ ಒಬ್ಬರು ಒಂದಾದರು ಬಾಂಕ್ಖಾತೆಯನ್ನು ಹೊಂದಿರುವುದು ಸಾಮಾನ್ಯ. ಇನ್ನು ಬ್ಯಾಂಕ್ ನ ಪ್ರತಿಯೊಬ್ಬ ಖಾತೆದಾರರು ಕೂಡ ಬ್ಯಾಂಕ್ ನಿಯಮದ ಬಗ್ಗೆ ತಿಳಿದುಕೊಂಡಿರಬೇಕು. ಇನ್ನು ಕೆಲವರು ಒಂದ್ಕಕಿಂತ ಹೆಚ್ಚಿನ ಬ್ಯಾಂಕ್ ಖಾತೆಯನ್ನು ಕೂಡ ಹೊಂದಿರುತ್ತಾರೆ. ಇದೀಗ ಬ್ಯಾಂಕ್ ಖಾತೆದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಮಾಹಿತಿಯನ್ನು ನೀಡಿದೆ.
![saving bank account rules and regulations](https://malnadsiri.com/wp-content/uploads/2023/08/saving-bank-account-rules-and-regulations--1024x576.jpg)
ಬ್ಯಾಂಕ್ ನಲ್ಲಿನ ಉಳಿತಾಯ ಖಾತೆ
ಬ್ಯಾಂಕುಗಳು ಗ್ರಾಹಕರಿಗೆ ವಿವಿಧ ಖಾತೆ ತೆರೆಯಲು ಆಯ್ಕೆಯನ್ನು ನೀಡುತ್ತವೆ. ಗ್ರಾಹಕರು ಅವರ ಇಚ್ಛೆಗೆ ಅನುಗುಣವಾಗಿ ಖಾತೆಯನ್ನು ತೆರೆಯುತ್ತಾರೆ. ಸಾಮಾನ್ಯವಾಗಿ ಜನರು ಹೆಚ್ಚಾಗಿ ಉಳಿತಾಯ ಖಾತೆಯನ್ನು ಹೊಂದಿರುತ್ತಾರೆ. ಎರಡಕ್ಕಿಂತ ಹೆಚ್ಚಿನ ಉಳಿತಾಯ ಖಾತೆಯನ್ನು ಕೂಡ ಕೆಲವರು ಹೊಂದಿರುವ ಉದಾಹರಣೆಗಳಿವೆ. ಇದೀಗ ಎರಡು ಅಥವಾ ಅದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವವರಿಗೆ ಆರ್ ಬಿಐ ಹೊಸ ನಿಯಮವನ್ನು ಜಾರಿಗೊಳಿಸಿದೆ.
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇದ್ದವರಿಗೆ RBI ನಿಂದ ಹೊಸ ನಿಯಮ
ಒಂದಕ್ಕಿಂತ ಹೆಚ್ಚಿನ ಉಳಿತಾಯ ಖಾತೆಯನ್ನು ಹೊಂದಿದ್ದರೆ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಯಾವುದೇ ವ್ಯಕ್ತಿಯು ಆದಾಯವನ್ನು ಗಳಿಸುತ್ತಿದ್ದರೆ ಬಹು ಉಳಿತಾಯ ಖಾತೆಯನ್ನು ಹೊಂದಿರುವುದಕ್ಕಿಂತ ಒಂದೇ ಉಳಿತಾಯ ಖಾತೆಯನ್ನು ಹೊಂದಿದರೆ ಯಾವುದೇ ರೀತಿಯ ನಷ್ಟ ಎದುರಾಗುವುದಿಲ್ಲ. ಒಂದು ಉಳಿತಾಯ ಖಾತೆಯ ನಿರ್ವಹಣೆಯು ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ.
ತೆರಿಗೆ ಪಾವತಿಯ ಸಮಯದಲ್ಲಿ ಉಳಿತಾಯ ಖಾತೆಯ ವಿವರವನ್ನು ನೀಡಬೇಕಾಗುತ್ತದೆ. ಒಂದು ಬ್ಯಾಂಕ್ ನಿರ್ವಹಣೆಯು ತೆರಿಗೆ ರಿಟರ್ನ್ ಸಲ್ಲಿಸುವಾಗ ಬ್ಯಾಂಕಿಂಗ್ ವಿವರಗಳು ಒಂದೇ ಬ್ಯಾಂಕ್ ಖಾತೆಯಲ್ಲಿ ಲಭ್ಯವಿದ್ದರೆ ತೆರಿಗೆ ಪಾವತಿ ಸುಲಭವಾಗುತ್ತದೆ. ಇನ್ನು ಒಂದು ಉಳಿತಾಯ ಖಾತೆಯನ್ನು ಹೊಂದಿದ್ದರೆ ಹೆಚ್ಚಿನ ಶುಲ್ಕ ಪಾವತಿಯಿಂದ ತಪ್ಪಿಸಿಕೊಳ್ಳಬಹುದು.
ಹೆಚ್ಚಿನ ಉಳಿತಾಯ ಖಾತೆ ಹೊಂದಿದರೆ ಕಟ್ಟಬೇಕು ದಂಡ
ಬಹು ಉಳಿತಾಯ ಖಾತೆಯು ಡೆಬಿಟ್ ಕಾರ್ಡ್, AMC, SMS ಸೇವಾ ಶುಲ್ಕ, ಕನಿಷ್ಠ ಬ್ಯಾಲೆನ್ಸ್ ಇತ್ಯಾದಿಗಳ ಶುಲ್ಕ ಪಾವತಿಯ ಹೊರೆ ಹೆಚ್ಚಿಸುತ್ತದೆ. ಬಹು ಉಳಿತಾಯ ಖಾತೆಯು CIBIL ರೇಟಿಂಗ್ ಮೇಲೆ ಪರಿಣಾಮವನ್ನ ಬೀರುತ್ತದೆ. ಇನ್ನು ಎರಡಕ್ಕಿಂತ ಹೆಚ್ಚಿನ ಉಳಿತಾಯ ಖಾತೆಯ TDS ಹೆಚ್ಚಾಗುತ್ತದೆ.
ಇನ್ನು ಎರಡಕ್ಕಿಂತ ಹೆಚ್ಚಿನ ಉಳಿತಾಯ ಖಾತೆಯನ್ನು ಹೊಂದಿದ್ದರೆ ಒಂದು ಉಳಿತಾಯ ಖಾತೆಗೆ TDS ಅನ್ವಯಿಸುವ ಬದಲಾಗಿ ಎಲ್ಲ ಉಳಿತಾಯ ಖಾತೆಗೆ TDS ಅನ್ವಯಿಸುವ ಮೂಲಕ ಕೆಲವೊಮ್ಮೆ ವಂಚನೆಗೆ ಒಳಗಾಗಬೇಕಾಗುತ್ತದೆ. ಹೆಚ್ಚಿನ ಉಳಿತಾಯ ಖಾತೆ ಹೊಂದಿದ್ದರೆ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಕಷ್ಟವಾಗುತ್ತದೆ. ಇನ್ನು ಕನಿಷ್ಠ ಠೇವಣಿ ಇಡದೆ ಇದ್ದರೆ ನೀವು ದಂಡವನ್ನ ಕೂಡ ಕಟ್ಟಬೇಕಾಗುತ್ತದೆ. ಅದೇ ರೀತಿಯಲ್ಲಿ ಅಧಿಕ ಬ್ಯಾಂಕ್ ಜನರ CBIL ಸ್ಕೋರ್ ಮೇಲೆ ನೇರ ಪರಿಣಾಮವನ್ನ ಬೀರುತ್ತದೆ.