Hello ಸ್ನೇಹಿತರೇ, ಶಕ್ತಿ ಯೋಜನೆಯ ಬಳಿಕ ರಾಜ್ಯದಲ್ಲಿ ಸರಕಾರಿ ಬಸ್ ಗಳಿಗೆ ಅತ್ಯುತ್ತಮ ಬೇಡಿಕೆ ಬರುತ್ತಿದೆ. ಯಾವಾಗಲೂ ಬಿಕೊ ಎನ್ನುತ್ತಿದ್ದ ಸರಕಾರಿ ಬಸ್ ಈಗ ಸದಾ ವಾಹನ ಜನಜಂಗುಳಿಯಿಂದ ತೇಲಾಡುತ್ತಿದೆ ಎನ್ನಬಹುದು. ಮಹಿಳೆಯರ ಓಡಾಟ ಹೆಚ್ಚಾದಂತೆ ಸರಕಾರಿ ಬಸ್ (Bus) ಪ್ರಯಾಣಿಕರ ಸಂಖ್ಯೆ ಕೂಡ ಅಧಿಕವಾಗಿದೆ.

ಮಹಿಳೆಯರಿಗೆ ಉಚಿತ ಬಸ್ ಯೋಜನೆಯಾದ ಶಕ್ತಿಗೆ ಈಗ ಬಂಪರ್ ಮಟ್ಟದಲ್ಲಿ ಕೊಡುಗೆ ನೀಡಲಾಗ್ತಾ ಇದೆ. ಈ ಮೂಲಕ ಕೆಎಸ್ಆರ್ಟಿಸಿ ಹಾಗೂ ಇತರ ನಿಗಮಗಳಿಗೆ ಈಗ ಸಮಸ್ಯೆ ಆಗಿದೆ ಎಂಬ ಮಾತು ಕೇಳಿ ಬರುತ್ತಿದೆ ಈ ಬಗ್ಗೆ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ (Ramalinga reddy) ಅವರು ನೂತನ ಬಸ್ ಸಂಚಾರ ಸಿಬಂದಿ ನೇಮಕಾತಿ ಇನ್ನಿತರ ಮಾಹಿತಿ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೊರತೆ ಬಗೆಹರಿಯಲಿದೆ
ಸರಕಾರಿ KSRTC ಹಾಗೂ ಇತರ ಬಸ್ ನಿಗಮದಲ್ಲಿ ಸಾರಿಗೆ ಬಸ್ ಮತ್ತು ಸಿಬಂದಿಯ ಕೊರತೆ ತುಂಬಾ ಇದೆ. ಹಾಗಾಗಿ ಈ ಬಗ್ಗೆ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಮಾತಾಡಿದ್ದಾರೆ. ಅವರು SC/ST ಹಾಗೂ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತಾಡಿದ್ದಾರೆ. ನಾಲ್ಕು ಸಾವಿರ ನೂತನ ಬಸ್ ಖರೀದಿ ಮತ್ತು 13ಸಾವಿರ ಸಿಬಂದಿ ನೇಮಕಾತಿಯ ಬಗ್ಗೆ ಮಾತಾಡಿದ್ದ ಅವರು ಬಸ್ ಮತ್ತು ಸಿಬಂದಿ ಕೊರತೆ ಇರುವುದು ಗಮನಕ್ಕೆ ಬಂದಿದೆ ಎಂದು ಹೇಳಿದರು.
ಸದ್ಯ ಎಲ್ಲ ನಿಗಮದಲ್ಲಿ ಸರಿಸುಮಾರು 11 ಸಾವಿರ ನಿವೃತ್ತಿ ಹೊಂದಿದ್ದಾರೆ. ಹಾಗಾಗಿ ಅಲ್ಲಿ ಪುನಃ ನೇಮಕ ಮಾಡಬೇಕಿದೆ ಅದೇ ರೀತಿ ಕಳೆದ 7 ಏಳು ವರ್ಷದಿಂದ ಚಾಲಕರು , ಕಂಡಕ್ಟರ್, ನೇಮಕಾತಿ ನಡೆದಿಲ್ಲ ಅವರೆಲ್ಲ ಸಿಬಂದಿ ಅನುಪಸ್ಥಿತಿ ನೇಮಕ ಮಾಡಲು ಸಿದ್ಧತೆ ಮಾಡುತ್ತಿದೆ. ಬಸ್ ಸಂಖ್ಯೆ ಕಡಿಮೆ ಇದ್ದ ಕಾರಣ ಸಿಬಂದಿ ಕೂಡ ಕಡಿಮೆ ಇದ್ದಾರೆ. ಬಸ್ ಮಾರ್ಗಗಳು ಕೂಡ ಕಡಿಮೆಯಾಗಿದೆ. ಶೀಘ್ರ ಸಿಬಂದಿ ನೇಮಕಾತಿ ಮತ್ತು ಬಸ್ ಖರೀದಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ.
ಒಟ್ಟಾರೆಯಾಗಿ ಬಸ್ ಖರೀದಿ ಮತ್ತು ಸಿಬಂದಿ ನೇಮಕ ಮಾಡಲಯ ಸಾರಿಗೆ ಇಲಾಖೆ ಸಚಿವರು ಒಂದು ಕಡೆ ಮುಂದಾಗಿದ್ದರೆ. ಶಕ್ತಿ ಯೋಜನೆಯಿಂದ ನಷ್ಟ ಆಗಿದೆ ನಷ್ಟ ಸರಿದೂಗಿಸಿ ಸಹಾಯಧನ ನೀಡುವಂತೆ ಖಾಸಗಿ ಅವರು ಮನವಿ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಯಾರ ಮನವಿ ಹೆಚ್ಚು ಪರಿಗಣಿಸಲ್ಪಡುತ್ತದೆ ಎಂಬ ಪ್ರಶ್ನೆ ಕೂಡ ಎದುರಾಗಿದೆ. ಸರಕಾರದಿಂದ ಮೋಸ ಆಗಿದೆ ಎಂಬ ದೂರು ಕೂಡ ಕೇಳಿ ಬರುತ್ತಿದೆ.