Traffic Rule: ಹೊಸ ಸಂಚಾರ ನಿಯಮ. ಇನ್ಮುಂದೆ ಈ ತಪ್ಪು ಮಾಡಿದರೆ 25000 ರೂ ದಂಡ.

Traffic Rule

Traffic Rule: ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಮತ್ತು ಸಂಚಾರ ಉಲ್ಲಂಘನೆಯನ್ನು ತಡೆಯುವ ಗುರಿಯನ್ನು ಹೊಂದಿರುವ ಮಹತ್ವದ ಕ್ರಮದಲ್ಲಿ, ಅಧಿಕಾರಿಗಳು ಕಠಿಣ ಹೊಸ ಸಂಚಾರ ನಿಯಮವನ್ನು ಜಾರಿಗೆ ತಂದಿದ್ದಾರೆ. ತಕ್ಷಣವೇ ಜಾರಿಗೆ ಬರುವಂತೆ, ನಿರ್ದಿಷ್ಟ ಉಲ್ಲಂಘನೆಯನ್ನು ಮಾಡುವಲ್ಲಿ ಸಿಕ್ಕಿಬಿದ್ದ ವ್ಯಕ್ತಿಗಳು 25,000 ರೂ.ಗಳ ಭಾರಿ ದಂಡವನ್ನು ಎದುರಿಸಬೇಕಾಗುತ್ತದೆ, ಇದು ಅಜಾಗರೂಕ ಚಾಲನೆಯ ವರ್ತನೆಯ ವಿರುದ್ಧ ದೃಢವಾದ ನಿಲುವನ್ನು ಸೂಚಿಸುತ್ತದೆ.

Traffic Rule For Minors
Traffic Rule For Minors

ಸದ್ಯ ದೇಶದಲ್ಲಿ ಈಗಾಗಲೇ ಸಾಕಷ್ಟು ಸಂಚಾರ ನಿಯಮಗಳು ಜಾರಿಯಾಗಿದೆ. ವಾಹನ ಸವಾರರ ಸುರಕ್ಷೆತೆಗಾಗಿ ಹಾಗೂ ರಸ್ತೆಗಳಲ್ಲಿ ಉಂಟಾಗುವ ಅಪಾಯವನ್ನು ತಡೆಯುವ ಉದ್ದೇಶದಿಂದ ಸರ್ಕಾರ ಸಂಚಾರ ನಿಯಮವನ್ನು ಕಠಿಣಗೊಳಿಸುತ್ತದೆ.

ರಸ್ತೆಗಳಲ್ಲಿ ವಾಹನ ಚಲಾಯಿಸುವ ಪ್ರತಿಯೊಬ್ಬರೂ ಕೂಡ ಸಂಚಾರ ನಿಯಮಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಸದ್ಯ ಅಪ್ರಾಪ್ತ ಮಕ್ಕಳಿಗಾಗಿ ಹೊಸ Traffic Rule ಜಾರಿಯಾಗಿದೆ. ಇದರ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

ಪೋಷಕರೇ ನಿಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನವನ್ನು ನೀಡುವ ಮುನ್ನ ಎಚ್ಚರ

Traffic Rule For Minors
Traffic Rule For Minors

ಸಾಮಾನ್ಯವಾಗಿ 18 ವರ್ಷ ಮೇಲ್ಪಟ್ಟವರಿಗೆ ವಾಹನ ಪವಾರವಾನಗಿಯನ್ನು ನೀಡಲಾಗುತ್ತದೆ. 18 ವರ್ಷ ಮೇಲ್ಪಟ್ಟವರು ವಾಹನವನ್ನು ಚಲಾಯಿಸಲು ಅರ್ಹರಾಗಿರುತ್ತಾರೆ. ಇನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನವನ್ನು ಚಲಾಯಿಸುವುದು ಕಾನೂನು ಬಾಹಿರವಾಗಿದೆ. ಈ ಕಾನೂನಿನ ನಿಯಮವನ್ನು ಉಲ್ಲಂಘಿಸಿ ಕೆಲ ಪೋಷಕರು ತಮ್ಮ ಮಕ್ಕಳಿಗೆ ವಾಹನವನ್ನು ಚಲಾಯಿಸಲು ಕೊಡುತ್ತಾರೆ. ಇದನ್ನು ಗಮನಿಸಿದ ಸಂಚಾರ ಇಲಾಖೆ ಇದೀಗ ಹೊಸ ನಿಯಮವನ್ನು ಜಾರಿಗೊಳಿಸಿದೆ. ಪೋಷಕರು ಈ ಹೊಸ ಸಂಚಾರ ನಿಯಮವನ್ನು ತಿಳಿಯುವುದು ಅಗಾತ್ಯವಾಗಿದೆ.

ಅಪ್ರಾಪ್ತರು ಮಕ್ಕಳಿಗೆ ವಾಹನ ನೀಡಿದರೆ ಕಟ್ಟಬೇಕು ಬಾರಿ ದಂಡ

Traffic Rule For Minors
Traffic Rule For Minors

ವಾಹನ ಚಲಾಯಿಸಲು ನಿಗದಿತ ವಯೋಮಿತಿಯನ್ನು ಇರಿಸಲಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಲಾಯಿಸುವುದು ಅಪರಾಧವಾಗಿದೆ. ಇನ್ನು ದ್ವಿಚಕ್ರವಾಹನದಲ್ಲಿ ಅಪ್ರಾಪ್ತರು ವಾಹನ ಚಲಾಯಿಸಿದರೆ ಹೆಚ್ಚಿನ Fine ವಿಧಿಸಲಾಗುತ್ತದೆ.

ಕಾನೂನಿನ ನಿಯಮವನ್ನು ವಿರೋಧಿಸಿ ನೀವು ನಿಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನವನ್ನು ನೀಡಿದರೆ 25 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ. ಇನ್ನುಮುಂದೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವಾಹನವನ್ನು ನೀಡುವ ಮುನ್ನ ಪೋಷಕರು ಎಚ್ಚರ ವಹಿಸುವುದು ಸೂಕ್ತ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ವಾಹನವನ್ನು ತೆಗೆದುಕೊಂಡಿ ರಸ್ತೆಗಿಳಿದರೆ ನಿಮ್ಮ ಜೇಬಿಗೆ ಕತ್ತರಿ ಬೀಳುವುದಂತೂ ನಿಜ.

Join Telegram Group Join Now
WhatsApp Group Join Now

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ