ಮಹಿಳೆಯರಿಗೆ ಕೇಂದ್ರದಿಂದ ಸಿಗಲಿದೆ 3 ಲಕ್ಷ ರೂಪಾಯಿ! ಇನ್ನೊಂದು ಯೋಜನೆ ಹೊರತಂದ ಕೇಂದ್ರ ಸರ್ಕಾರ

Udyogini: ರಾಷ್ಟ್ರದಾದ್ಯಂತ ಮಹಿಳೆಯರ ಸಬಲೀಕರಣದ ಗುರಿಯನ್ನು ಹೊಂದಿರುವ ಹೆಗ್ಗುರುತು ಕ್ರಮದಲ್ಲಿ, ಕೇಂದ್ರ ಸರ್ಕಾರವು ಪ್ರವರ್ತಕ ಯೋಜನೆಯನ್ನು ಪ್ರಾರಂಭಿಸಿದೆ, ಇದು ಜೀವನದ ವಿವಿಧ ಹಂತಗಳ ಮಹಿಳೆಯರಿಗೆ ಗಣನೀಯ ಆರ್ಥಿಕ ನೆರವು ನೀಡುವ ಭರವಸೆ ನೀಡಿದೆ. ಈ ಉಪಕ್ರಮದ ಅಡಿಯಲ್ಲಿ, ಅರ್ಹ ಮಹಿಳೆಯರು 3 ಲಕ್ಷ ರೂಪಾಯಿಗಳ ಗಮನಾರ್ಹ ಮೊತ್ತದಿಂದ ಪ್ರಯೋಜನ ಪಡೆಯುತ್ತಾರೆ, ಇದು ಲಿಂಗ ಸಮಾನತೆ ಮತ್ತು ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುವ ದಿಟ್ಟ ಹೆಜ್ಜೆಯನ್ನು ಸೂಚಿಸುತ್ತದೆ

Udyogini Yojana Business Loan
Udyogini Yojana Business Loan

ಮಹಿಳೆಯರಿಗಾಗಿ ಸರ್ಕಾರವು Udyogini Yojana ಜಾರಿಗೊಳಿಸುವ ಮೂಲಕ ಮಹಿಳೆಯರಿಗೆ ಹೊಸ ಅವಕಾಶವನ್ನು ನೀಡಲಿದೆ. ಈ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ 3 ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತದೆ. ಸರ್ಕಾರದ ಈ ಸಹಾಯಧನವನ್ನು ಉಪಯೋಗಿಸಿಕೊಂಡು ಮಹಿಳೆಯರು ತಮ್ಮ ಸ್ವಂತ ಉದ್ಯೋಗದ ಕನಸನ್ನು ನನಸು ಮಾಡಿಕೊಳ್ಳಬಹುದು.

ಮಹಿಳೆಯರು 88 ಬಗೆಯ ಸಣ್ಣ ಉದ್ಯೋಗಗಳನ್ನು ಸ್ಥಾಪಿಸಲು ಈ ಯೋಜನೆಯು ನೆರವಾಗಲಿದೆ. ಇನ್ನು ಮಹಿಳೆಯರು ಉದ್ಯಮಿಗಳಾಗಿ ಮತ್ತು ದೊಡ್ಡ ಮಟ್ಟದಲ್ಲಿ ಉದ್ಯಮಿಗಳಾಗಿ ಬೆಳೆದು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ.

ಮಹಿಳೆಯರೇ ಸ್ವಂತ ಬಿಸಿನೆಸ್ ಮಾಡವುವ ಆಸೆ ಇದೆಯಾ…?

ಈ ಯೋಜನೆಯನ್ನು ಮೊದಲು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ. ನಂತರ ಮಹಿಳೆಯರ ಅಭಿವೃದ್ದಿಗಾಗಿ Central Government ಈ ಯೋಜನೆಯನ್ನು ಜಾರಿಗೊಳಿಸಿದೆ. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಆರ್ಥಿಕವಾಗಿ ನೆರವಾಗಲು ಸರ್ಕಾರ ಈ ಯೋಜನೆಯನ್ನು ರೂಪಿಸಿದೆ. ಇನ್ನು ಈ ಯೋಜನೆಯ ಅಡಿಯಲ್ಲಿ 48,000 ಮಹಿಳೆಯರು ಸಣ್ಣ ಉದ್ಯಮಿಗಳಾಗಿದ್ದಾರೆ. ಮಹಿಳೆಯರ ಸ್ವಂತ ಉದ್ಯೋಗದ ಕನಸಿಗೆ ಸರ್ಕಾರ ಈ ಯೋಜನೆ ಸಹಾಯವಾಗಲಿದೆ.

ಕೇಂದ್ರದಿಂದ ಸಿಗಲಿದೆ 3 ಲಕ್ಷ ರೂ.

ಈ ಉದ್ಯೋಗನಿಧಿ ಯೋಜನೆಯ ಅಡಿಯಲ್ಲಿ ಮಹಿಳೆಯರು 3 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಇನ್ನು ಅಂಗವಿಕಲ ಮಹಿಳೆಯರು, ವಿಧವೆಯರಿಗೆ ಸಾಲದ ಮಿತಿ ಇಲ್ಲ. ವ್ಯವಹಾರ ಮತ್ತು ವಿದ್ಯಾರ್ಹತೆಯ ಆಧಾರದ ಮೇಲೆ ಅಂಗವಿಕಲ ಮಹಿಳೆಯರು, ವಿಧವೆಯರಿಗೆ ಹೆಚ್ಚಿನ ಸಾಲವನ್ನು ನೀಡಲಾಗುತ್ತದೆ. ಅಂಗವಿಕಲರಿಗೆ ಹಾಗೂ ವಿಧವೆಯರಿಗೆ Interest Free Loan ನೀಡಲಾಗುತ್ತದೆ. ಇತರ ಮಹಿಳೆಯರಿಗೆ ಶೇ. 10 ರಿಂದ ಶೇ. 12 ರ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುತ್ತದೆ.

ಯೋಜನೆಯ ಲಾಭ ಪಡೆಯಲು ಈ ಷರತ್ತುಗಳು ಅನ್ವಯ

•18 ರಿಂದ 55 ವರ್ಷದವರು ಈ ಯೋಜನೆಯ ಲಾಭವನ್ನು ಪಡೆಯಬಹುದು.

Join Telegram Group Join Now
WhatsApp Group Join Now

•ಈ ಸಾಲವನ್ನು ಪಡೆಯಲು ಯಾವುದೇ ಗ್ಯಾರಂಟಿಯನ್ನು ನೀಡುವ ಅಗತ್ಯ ಇರುವುದಿಲ್ಲ.

•ಮಹಿಳೆಯ ಕುಟುಂಬದ ಆದಾಯ ರೂ. 1.5 ಲಕ್ಷ ಅಥವಾ ಕಡಿಮೆ ಇರಬೇಕಾಗುತ್ತದೆ. ವಿಧವೆಯರು ಮತ್ತು ಅಂಗವಿಕಲ ಮಹಿಳೆಯರಿಗೆ ಯಾವುದೇ ಆದಾಯ ಮಿತಿ ಇಲ್ಲ.

•ಈ ಸಾಲಕ್ಕಾಗಿ ನೀವು ಯಾವುದೇ ಪ್ರಕ್ರಿಯೆ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

•ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ, ರೇಷನ್ ಕಾರ್ಡ್, ಜಾತಿ ಪ್ರಮಾಣಪತ್ರ ಸೇರಿದಂತೆ ಇನ್ನಿತರ ಮುಖ್ಯ ದಾಖಲೆಯ ವಿವರವನ್ನು ನೀಡಬೇಕಾಗುತ್ತದೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ