Hello ಸ್ನೇಹಿತರೇ, ಸ್ವಂತ ಮನೆ ನಿರ್ಮಾಣದ ಕನಸು ಪ್ರತಿಯೊಬ್ಬರಲ್ಲೂ ಇರುವುದು ಸಹಜ. ತಮ್ಮದೇ ಆದ ಸ್ವಂತ ಮನೆ ನಿರ್ಮಾಣ ಅಥವಾ ಖರೀದಿಗೆ ಜನರು ಹೆಚ್ಚು ಆಸಕ್ತಿ ತೋರುತ್ತಾರೆ. ಆದರೆ ಒಂದು ಹೊಸ ಮನೆ ನಿರ್ಮಾಣ ಅಥವಾ ಖರೀದಿಗೆ ಲಕ್ಷ ಲಕ್ಷ ಹಣದ ಅವಶ್ಯಕತೆ ಇರುತ್ತದೆ.

ಸಾಕಷ್ಟು ಜನರು ಆರ್ಥಿಕ ಕೊರತೆ ಕಾರಣ ತಮ್ಮ ಮನೆ ನಿರ್ಮಾಣದ ಕನಸನ್ನು ಹಾಗೆ ಇಟ್ಟುಕೊಂಡಿದ್ದಾರೆ. ಇನ್ನು ಈಗಾಗಲೇ ಕೇಂದ್ರ ಸರ್ಕಾರ ದೇಶದಲ್ಲಿರುವ ನಿರ್ಗತಿಕರಿಗಾಗಿ ಮನೆ ನಿರ್ಮಿಸುವ ಸಲುವಾಗಿ Pradhan Mantri Awas Yojana ಈಗಾಗಲೇ ಚಾಲ್ತಿಯಲ್ಲಿದೆ.
ಸ್ವಂತ ಮನೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಯೋಜನೆ
ಇನ್ನು ಮೂರು ಲಕ್ಷಕ್ಕಿಂತ ಕಡಿಮೆ ಆದಾಯವನ್ನು ಹೊಂದಿರುವ ಯಾವುದೇ ವ್ಯಕ್ತಿಯು ಕೂಡ Pradhan Mantri Awas Yojana ಯ ಅಡಿಯಲ್ಲಿ ಪ್ರಯೋಜನವನ್ನು ಪಡೆಯಬಹುದು. Pradhan Mantri Awas Yojana ಅಡಿಯಲ್ಲಿ ಮೂರು ಕಂತುಗಳಲ್ಲಿ ಹಣವನ್ನು ನೀಡಲಾಗುತ್ತದೆ. ಮೊದಲನೆಯ ಕಂತಿನಲ್ಲಿ 50,000 , ಎರಡನೆಯ ಕಂತಿನಲ್ಲಿ 1.50 ಲಕ್ಷ, ಮೂರನೆಯಾ ಕಂತಿನಲ್ಲಿ 50,000 ಹಣವನ್ನು ನೀಡಲಾಗುತ್ತದೆ.
ಇನ್ನು ಓದಿ : ಮಳೆಯಿಲ್ಲದೆ ಕಂಗೆಟ್ಟ ಎಲ್ಲಾ ರೈತರಿಗೆ ಸಿಹಿಸುದ್ದಿ, ಸರ್ಕಾರದ ಮಹತ್ವದ ನಿರ್ಧಾರ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಮೋದಿ ಸರ್ಕಾರ 1.19 ಕೋಟಿ ಮನೆಗಳನ್ನು ಮಂಜೂರು ಮಾಡಿದೆ ಮತ್ತು ಈಗಾಗಲೇ 75 ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ಮನೆಗಳನ್ನು ನೀಡಲಾಗಿದೆ. ಇದೀಗ PMAY ಯೋಜನೆ ಜಾರಿಯಲ್ಲಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಬಡ್ಡಿ ಸಹಾಯಧನದ ಗೃಹ ಸಾಲ ಯೋಜನೆಯನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಕೇಂದ್ರ ಸರ್ಕಾರದ ಹೊಸ ಯೋಜನೆ ಯಾವುದೇ ಎನ್ನುವ ಬಗ್ಗೆ ಇಲ್ಲಿದೆ.
ಕೇಂದ್ರ ಸರ್ಕಾರದ ಗೃಹ ಸಾಲ ಯೋಜನೆ
ದೇಶದ ಪ್ರಧಾನಿ Narendra Modi ಅವರು August 15 ರಂದು ಬಡ್ಡಿ ಸಹಾಯಧನದ ಗೃಹ ಸಾಲ ಯೋಜನೆಯನ್ನು ಬಿಡುಗಡೆ ಮಾಡುವ ಬಗ್ಗೆ ಘೋಷಣೆ ಹೊರಡಿಸಿದ್ದರು. “ನಗರ ಪ್ರದೇಶಗಳಲ್ಲಿ ಸಣ್ಣ ಮನೆಗಳ ನಿರ್ಮಾಣಕ್ಕಾಗಿ ಮುಂದಿನ 5 ವರ್ಷಗಳಲ್ಲಿ ರೂ. 59760 ಕೋಟಿ ಮೊತ್ತದ ಬಡ್ಡಿ ಸಹಾಯಧನದ ಗೃಹ ಸಲ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಆಲೋಚಿಸಿದೆ”.
ಎಷ್ಟು ಬಡ್ಡಿದರದಲ್ಲಿ ಸಹಾಯಧನ ಸಿಗಲಿದೆ..?
ಒಟ್ಟು ಸಾಲದಲ್ಲಿ 9 ಲಕ್ಷದ ವರೆಗಿನ ಮೊತ್ತಕ್ಕೆ ವಾರ್ಷಿಕ 3 ರಿಂದ ಶೇ. 6.5 ರ ವರೆಗೆ ಬಡ್ಡಿ ಸಹಾಯಧನ ಸಿಗಲಿದೆ. ರೂ. 50 ಲಕ್ಷಕ್ಕಿಂತ ಕಡಿಮೆ ಮೊತ್ತದ ಗೃಹ ಸಾಲವನ್ನು 20 ವರ್ಷಗಳ ವರೆಗೆ ಪಡೆದಿರುವವರು ಪ್ರಸ್ತಾಪಿತ ಯೋಜನೆಗೆ ಅರ್ಹರಾಗಿರುತ್ತಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.
ಬಡ್ಡಿ ಸಹಾಯಧನದ ಮೊತ್ತವನ್ನು ಫಲಾನುಭವಿಗಳಿವೆ ಮುಂಗಡವಾಗಿ ನೀಡಲಾಗುತ್ತದೆ. ಮುಂದಿನ ವರ್ಷದಲ್ಲಿ ಪ್ರಧಾನ ಮಂತ್ರಿ ಗೃಹ ಸಾಲ ಯೋಜನೆ ನಗರ ಪ್ರದೇಶದ ಜನರಿಗೆ ಸಹಾಯವಾಗಲಿದೆ.