ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್ (LPG) ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ಸತತ ಎರಡನೇ ತಿಂಗಳಿಗೆ ಹೆಚ್ಚಿಸಲಾಗಿದೆ ಮತ್ತು ಹೊಸ ದರಗಳು ಜುಲೈ 1, 2020 ರಿಂದ ಜಾರಿಗೆ ಬಂದಿವೆ. ಆದಾಗ್ಯೂ, ಇತ್ತೀಚಿನ ಹೆಚ್ಚಳವು ಅತ್ಯಲ್ಪವಾಗಿದೆ. ಹೊಸ ಬೆಲೆಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ. ಅಧಿಸೂಚನೆಯ ಪ್ರಕಾರ, ಇಂದಿನಿಂದ 14.2 ಕೆಜಿ ಸಬ್ಸಿಡಿ ಹೊಂದಿರುವ ಎಲ್‌ಪಿಜಿ ಸಿಲಿಂಡರ್‌ಗೆ ದೆಹಲಿಯಲ್ಲಿ 1 ರೂ. ಹೆಚ್ಚಾಗಿರುತ್ತದೆ ಮತ್ತು ಎಲ್‌ಪಿಜಿ ಸಬ್ಸಿಡಿಯನ್ನು ನೇರ ಬ್ಯಾಂಕ್ ವರ್ಗಾವಣೆ (ಡಿಬಿಟಿ) ಮೂಲಕ ಫಲಾನುಭವಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

ಎಲ್‌ಪಿಜಿ ಸಿಲಿಂಡರ್‌ಗೆ ಸಂಬಂಧಿಸಿದ ಯೋಜನೆಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಸಬ್ಸಿಡಿ ಮೊತ್ತವನ್ನು ಬಳಕೆದಾರರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸುತ್ತದೆ. ಒಂದು ವರ್ಷದಲ್ಲಿ ಪ್ರತಿ ಕುಟುಂಬಕ್ಕೆ ತಲಾ 14.2 ಕಿಲೋಗ್ರಾಂಗಳ 12 ಸಿಲಿಂಡರ್‌ಗಳಿಗೆ ಸಬ್ಸಿಡಿಯನ್ನು ನೀಡಲಾಗುತ್ತದೆ.
ದಿ ಡೈರೆಕ್ಟ್ ಬೆನಿಫಿಟ್ ಟ್ರಾನ್ಫರ್ ಆಫ್ ಎಲ್‌ಪಿಜಿ (ಡಿಬಿಟಿಎಲ್) ಯೋಜನೆ ಪಹಲ್ (ಪ್ರತ್ಯಕ್ಷ್ ಹನ್‌ಸ್ಟಾಂಟಿಟ್ ಲ್ಯಾಬ್) ಅಡಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಯನ್ನು ಗ್ರಾಹಕರು/ ಫಲಾನುಭವಿಗಳ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತದೆ. ಇದನ್ನು 10 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯವಿರುವ ಕುಟುಂಬಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ.
ನಿಮ್ಮ ಖಾತೆಯಲ್ಲಿ ಸಬ್ಸಿಡಿಯನ್ನು ವರ್ಗಾಯಿಸಲಾಗಿದೆಯೇ ಎಂದು ನೀವು ಪರಿಶೀಲಿಸಲು ಬಯಸಿದರೆ, ನೀವು ಆನ್‌ಲೈನ್‌ನಲ್ಲಿ ಪರಿಶೀಲನೆ ಮಾಡಲು ಸಾಧ್ಯವಾಗಲಿದೆ. ಸರ್ಕಾರಿ ಸ್ವಾಮ್ಯದ ಕಂಪನಿಗಳಾದ ಐಒಸಿಎಲ್, ಎಚ್‌ಪಿ ಮತ್ತು ಬಿಪಿಸಿಎಲ್‌ನಲ್ಲಿ ನಿಮ್ಮ ಗ್ಯಾಸ್ ಸಬ್ಸಿಡಿಯ ಸ್ಟೇಟಸ್ ಅನ್ನು ನೀವು ಹೇಗೆ ಪರಿಶೀಲಿಸಬಹುದು ಎಂಬ ವಿವರವನ್ನು ನಾವಿಲ್ಲಿ ವಿವರಿಸಿದ್ದೇವೆ. ಮುಂದೆ ಓದಿ…
ನಿಮ್ಮ ಎಲ್‌ಪಿಜಿ ಐಡಿ ಇಲ್ಲದಿದ್ದರೆ ಹೇಗೆ ಚೆಕ್ ಮಾಡುವುದು?
ಹಂತ 1: ನಿಮ್ಮ ಎಲ್‌ಪಿಜಿ ಐಡಿ ನಿಮಗೆ ತಿಳಿದಿಲ್ಲದಿದ್ದರೆ, ನಿಮ್ಮ 17 ಅಂಕಿಯ ಎಲ್‌ಪಿಜಿ ಸಂಖ್ಯೆಯ ಕೆಳಗಿನ ಬಟನ್ ಅನ್ನು ನೀವು ಕ್ಲಿಕ್ ಮಾಡಬಹುದು.
ಹಂತ 2: ಅದಾದ ಬಳಿಕ ಕಂಪನಿಯ ಹೆಸರನ್ನು ಆಯ್ಕೆ ಮಾಡಬೇಕಾಗುತ್ತದೆ.
ಹಂತ 3: ಮೂರು ಆಯ್ಕೆಗಳಿಂದ, ನೀವು ಭಾರತ್ ಗ್ಯಾಸ್, ಎಚ್‌ಪಿ ಗ್ಯಾಸ್ ಅಥವಾ ಇಂಡೇನ್ ಅನ್ನು ಆಯ್ಕೆ ಮಾಡಬಹುದು
ಹಂತ 4: ಅದಾದ ಬಳಿಕ ಇನ್ನೊಂದು ಪುಟ ತೆರೆಯಲಿದೆ.
ಹಂತ 5: ಹೊಸ ಪುಟದಲ್ಲಿ, ನೀವು ಯಾವ ಆಯ್ಕೆಯನ್ನು ಮಾಡಿದ್ದೀರಿ ಎಂಬ ಆಧಾರದ ಮೇಲೆ ಕೆಲವು ವಿವರಗಳನ್ನು ಒದಗಿಸುವಂತೆ ನಿಮ್ಮಲ್ಲಿ ಕೇಳಲಾಗುತ್ತದೆ.
ಹಂತ 6: ಈ ವಿವರಗಳು ನಿಮ್ಮ ಫೋನ್ ಸಂಖ್ಯೆ, ನಿಮ್ಮ ವಿತರಕರ ಹೆಸರು, ನಿಮ್ಮ ಗ್ರಾಹಕ ಸಂಖ್ಯೆಯನ್ನು ಹೊಂದಿರುತ್ತದೆ.
ಹಂತ 7: ನೀವು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಬೇಕು ಮತ್ತು submit ಮಾಡಬೇಕು. ಅಲ್ಲಿ ನಿಮಗೆ ಮಾಹಿತಿ ಲಭ್ಯವಾಗಲಿದೆ.
ಎಲ್‌ಪಿಜಿ ಐಡಿಯಿದ್ದರೆ ಹೇಗೆ ಚೆಕ್ ಮಾಡುವುದು?
ಹಂತ 1:https://mylpg.in/?utm_source=DH-MoreFromPub&utm_medium=DH-app&utm_campaign=DHಗೆ ಭೇಟಿ ನೀಡಿ
ಹಂತ 2: ಈಗ ಒದಗಿಸಿದ ಜಾಗದ ಬಲಭಾಗದಲ್ಲಿ ನಿಮ್ಮ ಎಲ್‌ಪಿಜಿ ಐಡಿ ಅನ್ನು ನಮೂದಿಸಿ.
ಹಂತ 3: ಈಗ, ನೀವು ಯಾವ ಸಂಸ್ಥೆಯ ಎಲ್‌ಪಿಜಿ ಬಳಕೆ ಮಾಡುತ್ತಿದ್ದರೂ ಬಳಕೆದಾರರ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.
ಹಂತ 4: 17 ಅಂಕೆಗಳ ಎಲ್‌ಪಿಜಿ ಐಡಿಯನ್ನು ನಮೂದಿಸಿ.
ಹಂತ 5: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ವಿವರಗಳನ್ನು ಭರ್ತಿ ಮಾಡಿ
ಹಂತ 6: ಕ್ಯಾಪ್ಚಾ ಕೋಡ್ ನಮೂದಿಸಿ, proceed ಕ್ಲಿಕ್ ಮಾಡಿ
ಹಂತ 7: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ.
ಹಂತ 8: ಮುಂದಿನ ಪುಟದಲ್ಲಿ, ನಿಮ್ಮ ಇಮೇಲ್ ಐಡಿಯನ್ನು ನಮೂದಿಸಿ ಮತ್ತು ಪಾಸ್‌ವರ್ಡ್ ರಚಿಸಿ
ಹಂತ 9: ನಿಮ್ಮ ಇಮೇಲ್ ಐಡಿಗೆ ನೀವು ಸಕ್ರಿಯಗೊಳಿಸುವ ಲಿಂಕ್ ಬರಲಿದೆ.
ಹಂತ 10: ಲಿಂಕ್ ಅನ್ನು ಕ್ಲಿಕ್ ಮಾಡಿ, ನಿಮ್ಮ ಖಾತೆ ಸಕ್ರಿಯಗೊಳಿಸಲಾಗುತ್ತದೆ.
ಹಂತ 11: ಅದಾದ ಬಳಿಕ ನೀವು mylpg.in ಖಾತೆಗೆ ಲಾಗಿನ್ ಆಗಿ
ಹಂತ 12: ನಿಮ್ಮ ಬ್ಯಾಂಕ್ ಮತ್ತು ಆಧಾರ್ ಕಾರ್ಡ್ ಅನ್ನು ನಿಮ್ಮ ಎಲ್‌ಪಿಜಿ ಖಾತೆಗೆ ಲಿಂಕ್ ಮಾಡಲಾಗಿದೆಯೇ ಎಂದು ನಮೂದಿಸಿ
ಹಂತ 13: View Cylinder Booking History/subsidy transferred (ಸಿಲಿಂಡರ್ ಬುಕಿಂಗ್ ಇತಿಹಾಸ/ ಸಬ್ಸಿಡಿ ವರ್ಗಾಯಿಸಲಾಗಿದೆಯೇ ವೀಕ್ಷಿಸಿ) ಮೇಲೆ ಕ್ಲಿಕ್ ಮಾಡಿ